ಜನತಾ ರೂಪಿ ಜನಾರ್ಧನ ನಿನ್ನ ಸೇವೆಯಗೈವೆನು ಅನುದಿನ
ನಿನ್ನಯ ಶ್ರೀಪಾದಂಗಳಿಗರ್ಪಿತ ತನುಮನಧನ ವಿಜ್ಜೀವನ ||ಪ||

ಕೋಟಿ ಶರೀರದ ಕೋಟಿ ಮುಖಗಳಿಂ ಕೋಟಿ ಕೋಟಿ ಕರಚರಣಗಳಿಂದ
ಕಂಗೊಳಿಸುವ ತವ ಭದ್ರ ಸ್ವರೂಪಕೆ
ಶಿರ ಬಾಗುವೆನು ಆದರದಿಂದ ||೧||

ವಿಭಜಿತ ಭಾವದ ವಿವಿಧ ಸ್ವಭಾವದ ನಿನ್ನ ಪ್ರಭಾವಕೆ ಒಳಗಾಗಿಹೆವು
ವಿವಿಧತೆಯಲ್ಲಿಹ ಐಕ್ಯದ ಶಕ್ತಿಗೆ
ಭಕ್ತಿಯಿಂದಲಿ ಶರಣಾಗಿಹೆವು ||೨||

ಕ್ಷಣಿಕರು ನಾವು ಶಾಶ್ವತ ನೀನು ಸೃಷ್ಟಿಪ್ರಲಯ ಪರ್ಯಂತ ಅಮರನು
ನಿನ್ನಯ ಸೇವೆಗೆ ಬದ್ದರು ನಾವು
ಕಾಯಕಕೆ ಸನ್ನದ್ಧರು ನಾವು ||೩||

ವಿಶ್ವ ಕುಟುಂಬದ ಪರಿಕಲ್ಪನೆಯ ಆದರ್ಶದ ಆರಾಧನೆಗಾಗಿ
ಮೇದಿನಿಯೊಡಲಿನ ವೇದನೆ ನೀಗುತ
ಧನ್ಯತೆ ಹೊಂದುವ ಸಾಧನೆಗಾಗಿ ||೪||

, , , , , , , , , , , ,

मैं एक पत्नी होने के साथ साथ गृहिणी एवं माँ भी हुँ । लिखने का हुनर... ब्लॉग लिखती रहती हु... सनातन ग्रुप एक सकारात्मक ऊर्जा, आत्मनिर्भर बनाने की प्रेरणा देती जीवनी, राष्ट्रभक्ति गीत एवं कविताओं की माला पिरोया है । आग्रह :आपको पसन्द आये तो ऊर्जा देने के लिए शेयर एवं अपने सुझाव दीजिए ।

शालू सिंह

🙏 सकारात्मक जानकारी को फेसबुक पर पाने के लिए लाइक करें 👇

Leave a Reply