Nudidante Nadedavana
ನುಡಿದಂತೆ ನಡೆದವನ ಅಡಿಗೆನ್ನ ನಮನ
ಕತ್ತಲಲಿ ಬೆಳಕಿತ್ತ ನಿನಗೆನ್ನ ನಮನ
ಪರದಾಸ್ಯ ಮುಸುಕಿರಲು ಪರತತ್ವ ತುಂಬಿರಲು
ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸಿ ಬೆಳಗಿಸಿದೆ
ಬರಿದಾದ ಭಾವಗಳ ಒಡೆದೊಡೆದ ಹೃದಯಗಳ
ಒಂದೆಡೆಗೆ ಬೆಸಹೊಯ್ದು ದುರ್ಭೇದ್ಯ ನಿರ್ಮಿಸಿದೆ
ಬಡತನದ ಬೇಗೆಯಲಿ ಬರಿದಾದ ಸಿರಿತನದಿ
ಹಾಲಾಹಲವ ಕುಡಿದು ಅಮೃತವ ಸುರಿಸಿರುವೆ
ಹಗಲಿರುಳು ಇಲ್ಲದೆಯೇ ನಿಃಸವಾರ್ಥ ಸೇವೆಯಲಿ
ಮೈ ಮನವ ದಂಡಿಸುತ ಆದರ್ಶ ಬೆಳೆಸಿರುವೆ
ಬಹುಜನಕೆ ನೀ ತಿಳಿಯೆ ತಿಳಿದವಗೆ ನೀನೊಲಿವೆ
ಅವರೆಲ್ಲ ಹೃದಯಗಳ ದೇಗುಲದಿ ರಾಜಿಸುವೆ
ದೇಶಪ್ರೇಮವನೆರೆದು ಧ್ಯೇಯನಿಷ್ಠೆಯ ಬೆಳೆದು
ಆ ತಾಯಿ ಭಾರತಿಯ ವರಪುತ್ರ ನೀನಾದೆ