Aikyatheyu Mangoodi – ಏಕತೆಯು ಮಣ್ಗೂಡಿ ಭಾರತಿಯು ಬಳಲಿರಲು
ಏಕತೆಯು ಮಣ್ಗೂಡಿ ಭಾರತಿಯು ಬಳಲಿರಲು
ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ದೆ
ಗಾಳಿಯನು ಸೀಳಿ ಬಹ ಸುಯ್ಎಕರ ಶಬ್ದಕ್ಕೆ
ಸುಖದ ಸುಪ್ಪತ್ತಿಗೆಯನೊದ್ದೆ ಮೇಲೆದ್ದೆ !! ಪ !!
ಮೈಮರೆತ ಸೋದರರ ನಾಯಪಾಡನು ನೋಡಿ
ಬೆಂಕಿ ಹೊತ್ತಿದ ಹೃದಯ ತಳಮಳಿಸಿತೇನು ?
ತಾಯ್ನೆಲದ ಕಡುಮಮತೆ ತಿದಿಯನೊತ್ತಿದ ಹಾಗೆ
ಒಡಲೊಳಗೆ ಕರುಳ ಕುಡಿ ಮಿಡುಕಾಡಿತೇನು ? !! 1 !!
ಜಗವೆಲ್ಲ ಜಡವಾಗಿ ಮಲಗಿ ನಿದ್ರಿಸಿದಂದು
ನಟ್ಟಿರುಳಿನೊಳಗೊಬ್ಬನೇ ನಡೆದೆ ಮುಂದೆ
ಒಬ್ಬೊಬ್ಬ ಬಂಧುವನೆ ಮೇಲಕಬ್ಬಿಸಿ ತಂದು
ಸಂಘ ಸಂಜೀವಿನಿಯ ಸ್ವಿಕರಿಸಿರೆಂದೆ !! 2 !!
ಗಂಡೆದೆಯ ಗುಡಿಗಳಲಿ ಗೆಲ್ಲುಗಂಬವ ನಿಲಿಸಿ
ಗೋಪುರದ ತುದಿಗೆ ನೀ ಕೈದೋರಿದಂದು
ಯುವಕಕೋಟಿಯ ಹೃದಯ ಮಾರುಹೋಯಿತು ನಿನಗೆ
ಭಾರತದ ಸೌಭಾಗ್ಯರವಿ ಬಂದನೆಂದು !! 3 !!
ಮಹೇಶ ಮಡಿವಾಳ. ಬೆಳಗಾವಿ