ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ
ನಿನ್ನ ಚರಣ ಶರಣು ಪಡೆದು ದೇಶ ಸೇವೆಗೋದಾಗಲಿ || ಪ ||

ಮೊಗ್ಗು ಮೊಗ್ಗು ಬಿರಿದು ಬಿರಿದು ಹಿಡಿಹೂಗಳು ಅರಳಲಿ
ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ || 1 ||

ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದು
ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ || 2 ||

ಒಂದೇ ಧ್ಯೇಯನೆನಗೆ ದೇವ ಮುಡಿಪು ಸೇವೆ ಭಕ್ತಿಭಾವ
ನಿರತಪೂಜೆ ಇಂದ ನಿನ್ನ ದೇವರೂಪ ದೊರೆಯಲಿ || 3 ||

ದಿವ್ಯ ಭವ್ಯ ರಾಷ್ಟ್ತ್ರಜ್ಯೋತಿ ನಿನ್ನ ತೇಜಕಿಲ್ಲ ಸಾಟಿ
ಜ್ಯೋತಿರ್ಮಯ ದೀಪ್ತಿಯಿಂದ ಸಕಲ ಹೃದಯ ಬೆಳಗಲಿ || 4 ||

ನಿನಗೆ ಸರಿಸಮಾನರೆನಿಸಿ ಬೆಳೆದು ವರ್ಧಮಾನರೆನಿಸಿ
ದೇಶ ಧರ್ಮ ಸಂಸ್ಕೃತಿಗಳ ನೆಲೆಯನಾಂತು ಬೆಳೆಯಲಿ || 5 ||

, , , , , , , , , , , ,

मैं एक पत्नी होने के साथ साथ गृहिणी एवं माँ भी हुँ । लिखने का हुनर... ब्लॉग लिखती रहती हु... सनातन ग्रुप एक सकारात्मक ऊर्जा, आत्मनिर्भर बनाने की प्रेरणा देती जीवनी, राष्ट्रभक्ति गीत एवं कविताओं की माला पिरोया है । आग्रह :आपको पसन्द आये तो ऊर्जा देने के लिए शेयर एवं अपने सुझाव दीजिए ।

शालू सिंह

🙏 सकारात्मक जानकारी को फेसबुक पर पाने के लिए लाइक करें 👇

Leave a Reply