ಬೆಳಕು ಒಂದು ಇಳೆಗೆ ಬಂದು ಇರುಳನೆಲ್ಲ ಕಳೆಯಿತು
ಧರೆಯ ಕಣದ ಬತ್ತಿ ಉರಿದು ಕೋಟಿ ಹಣತೆ ಬೆಳಗಿತು ||ಪ||

ಆತ್ಮ ಒಂದು ರೂಪುಗೊಂಡು ಹಿಂದು ಎದೆಯೊಳರಳಿತು
ಸಿಂಧು ಬಿಂದು ನೊಂದು ಬೆಂದು ಬಂದು ಮನವ ತಲುಪಿತು
ಮಂತ್ರ ಒಂದು ಜನಿಸಿತು, ಸಂಘಶಕ್ತಿ ಉದಿಸಿತು
ಕವಿದು ನಿಂತ ದಾಸ್ಯಛಾಯೆ, ಬಿಟ್ಟಿತೋ ತೊಲಗಿತು ||೧||

ತತ್ವ ಒಂದು ಸಲಿಲವಾಗಿ ದೇಶವ್ಯಾಪಿ ಹರಿಯಿತು
ಹನಿಗಳೆಲ್ಲ ಒಂದುಗೂಡಿ ಹರಿವಿನಲ್ಲಿ ಮೊರೆಯಿತು
ಉಕ್ಕಿಹರಿವ ಸೆಳವಿನಲ್ಲಿ ಸೊಕ್ಕಿ ಬೆಳೆದ ಅಸುರಶಕ್ತಿ
ದಿಗಿಲುಬಿದ್ದು ರಕ್ತಕಾರಿ ಕೊಚ್ಚಿಹೋಯಿತು ||೨||

ಜೀವ ಒಂದು ತುಡಿದು ಮಿಡಿದು ಅಮೃತವ ಕಡೆಯಿತು
ಸ್ವಾರ್ಥ ವಿಷವ ಹಿಡಿದು ಕುಡಿದು ಸನಿಹಕೆ ಕರೆಯಿತು
ಕನಸು ಒಂದು ನೆಮ್ಮಿತು, ದುಡಿದು ನನಸುತೊಳಿಸಿತು
ರಾಷ್ಟ್ರಭಕಿ ಕಾರ್ಯಶಕ್ತಿ, ದುಂದುಭಿಯು ಮೊಳಗಿತು ||೩||

, , , , , , , , , , , ,

मैं एक पत्नी होने के साथ साथ गृहिणी एवं माँ भी हुँ । लिखने का हुनर... ब्लॉग लिखती रहती हु... सनातन ग्रुप एक सकारात्मक ऊर्जा, आत्मनिर्भर बनाने की प्रेरणा देती जीवनी, राष्ट्रभक्ति गीत एवं कविताओं की माला पिरोया है । आग्रह :आपको पसन्द आये तो ऊर्जा देने के लिए शेयर एवं अपने सुझाव दीजिए ।

शालू सिंह

🙏 सकारात्मक जानकारी को फेसबुक पर पाने के लिए लाइक करें 👇

Leave a Reply