Kaledihudu kaavirulu – ಕರವ ಜೋಡಿಸಬನ್ನಿ
ಕರವ ಜೋಡಿಸಬನ್ನಿ ಈ ರಾಷ್ಟ್ರಕಾರ್ಯದಲಿ
ಸ್ವರವ ಕೂಡಿಸಬನ್ನಿ ಒಕ್ಕೊರಲು ಘೋಷದಲಿ |
ನವಯುಗದ ನಿರ್ಮಾಣ ಗೈವ ಶುಭ ಆಶಯಕೆ
ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು ||
ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು
ತಾಯ್ನೆಲದ ಉನ್ನತಿಯ ಆದರ್ಶ ಗುರಿಯಿಹುದು
ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು
ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು |೧||
ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ
ಆಳುವರಸರ ಕೃಪೆಯ ಆಸರೆಯ ಹಂಗಿಲ್ಲ
ಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವು
ಮರಣ ಕೂಪದಿ ಧುಮುಕಿ ಮೇಲೆದ್ದು ಬಂದಿಹೆವು ||೨||
ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು?
ತಾಯೊಡಲ ತಳಮಳವು ಮನವ ಬಾಧಿಸದೇನು
ಮರೆಯುತಿರೆ ಎಲ್ಲೆಲ್ಲೂ ದ್ರೋಹ ವಿಚ್ಛಿದ್ರತೆಯು
ಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು? ||೩||
ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆ
ಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆ
ಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆ
ಹಿಂದು ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಗೆ ||೪||
karava jODisabanni I rAShTrakAryadali
svarava kUDisabanni okkoralu GOShadali |
navayugada nirmANa gaiva SuBa ASayake
AkRutiya mUDisalu jAgRutiya sAdhisalu ||
uttuMga saMskRutiya vArasike emagihudu
tAynelada unnatiya AdarSa guriyihudu
kaShTagaLanedurisuva keccedeya balavihudu
vairigaLa vyUhagaLa BEdisuva Calavihudu |1||
damana nirbaMdhagaLa aMjikeyu namagilla
ALuvarasara kRupeya Asareya haMgilla
kaThiNa agni parIkShegaLa geddu baMdihevu
maraNa kUpadi dhumuki mEleddu baMdihevu ||2||
kASmIradA kUgu nimage kELisadEnu?
tAyoDala taLamaLavu manava bAdhisadEnu
mareyutire ellellU drOha vicCidrateyu
maimaretu malagidare ellihudu Badrateyu? ||3||
nIvu kivigoDabEDi svArthigaLa nuDigaLige
Ajyavanu ereyadiri kuTilateya kiDigaLige
sahakarisi bOdhanege balavIva sAdhanege
hiMdu rAShTrIyateya prabala pratipAdanege ||4||