Rashtra Devige Prana Devige-ರಾಷ್ಟ್ರದೇವಗೆ ಪ್ರಾಣದೀವಿಗೆ

0

ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ
ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ ||ಪ||

ಕೋಟಿಕೋಟಿಯ ತರುಣ ಧಮನಿಯ ರಾಷ್ಟ್ರಪ್ರೇಮದ ಸ್ರೋತದಿ
ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ
ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ
ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಾಗಿದೆ ||೧||

ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳುಹುತ ಬೆದರದೆ
ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ
ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರುಷ
ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ ಬೆಳೆಸುವ ಸಾಹಸ ||೨||

ಹೂಣಗ್ರೀಕರ ಆಂಗ್ಲ ಮೊಗಲರ ದಹಿಸಿ ಹುಡಿಧೂಳೆಬ್ಬಿಸಿ
ಗೆದ್ದ ನೆಲದಲಿ ಧರ್ಮವೈರಿಗೆ ಚಿರ ಸಮಾಧಿಯ ನಿರ್ಮಿಸಿ
ಪ್ರಲಯ ರುದ್ರನ ಡಮರುವಾದನ ಶೂಲದಲಗಿನ ದರ್ಶನ
ನಡೆಯಲಿಂದೀ ದೇವಧರೆಯಲಿ ಕಾಲಭೈರವನರ್ತನ ||೩||

ಯಾವ ಮಂದೆಗು ಬಾಗೆವೆಂದಿಗು ಸ್ವಾಭಿಮಾನದ ಬಲವಿದೆ
ಬರಲಿ ವೈರಿಯು ಗೋರಿ ಕಾದಿದೆ ಗೆದ್ದು ಬದುಕುವ ಛಲವಿದೆ
ಬಾಳಬಲ್ಲೆವು ಆಳಬಲ್ಲೆವು ಸೋಲನೊಲ್ಲೆವು ಒಲ್ಲೆವು
ವಿಶ್ವವೆಲ್ಲವು ಮುನಿದು ನಿಂತರು ನಾಡನುಳಿಸಲು ಬಲ್ಲೆವು ||೪||

Leave a Reply

Your email address will not be published. Required fields are marked *