Taruna Balada
ತರುಣ ಬಲದ ಜಲಧಿ ಭರದಿ ಭೋರ್ಗರೆದಿದೆ
ಭರತ ಭುವಿಯ ಭಾಗ್ಯ ದ್ವಾರ ಇಂದು ತೆರೆದಿದೆ
ಇಂದು ಇಂದು ಸಿಂಧೂ ಬಾಗಿ ಉಕ್ಕಿ ಮೊರೆದಿದೆ
ಹಿಂದು ಹಿಂದು ಎಂಬ ಘೋಷ ಮುಗಿಲ ಮುಟ್ಟಿದೆ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಅಮರ ನಿನ್ನ ಕೀರುತಿ..
ಕಷ್ಟ ನಷ್ಟ ಏನೆ ಬರಲಿ ನಿಷ್ಠೆಯೆಮದು ರಾಷ್ಟ್ರಕೇ
ಕಷ್ಟವನ್ನು ಬಡಿದು ಅಟ್ಟಿ ದುಷ್ಟರನ್ನು ದೂರಕೆ
ದೂರ್ತ ಶತ್ರುಗಳನ್ನು ಮೆಟ್ಟಿ ಚಂಡಾಡುತ ರುಂಡವ
ಗೈವೆವಿಂದು ಸಮರಭೂಮಿಯಲ್ಲಿ ರುದ್ರತಾಂಡವ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಇದೋ ಪ್ರಾಣದಾಹುತಿ…
ಪರಿದ ಶಾಂತಿ ಮಂತ್ರ ಜಪಿಸಿ ಕುಳಿತರೇನು ಸಾರ್ಥಕ
ವ್ಯಕ್ತಿ ವ್ಯಕ್ತಿಯಾಗಲಿಂದು ರಾಷ್ಟ್ರಭಕ್ತ ಸೈನಿಕ
ಸಂಘರ್ಷದ ಸಮಯದಲ್ಲಿ ಹೇಡಿತನವು ಸಲ್ಲದು
ಸ್ವಾಭಿಮಾನಿ ಯುವಜನಾಂಗ ಸೋಲನೆಂದು ಒಲ್ಲದು
ಜೈ ಭಾರತಿ ಜೈ ಭಾರತಿ ಜೈ ಭಾರತಿ ನಿನಗೆ ಜಯದ ಆರತಿ…
ಹಿಂದುಶಕ್ತಿಯಿಂದ ಮುಕ್ತಿ ಜಗದ ಜನರ ಅಳಲಿಗೆ
ಹಿಂದು ತತ್ವದಿಂದ ಮಾತ್ರ ಮನುಜಕುಲದ ಏಳಿಗೆ
ನಿದ್ದೆ ತೊರೆದು ಎದ್ದು ಬನ್ನಿ ಕೋಟಿ ಹಿಂದು ತರುಣರೆ
ಬದ್ಧರಾಗಿ ಧ್ಯೇಯಕಿಂದು ದಾಟಿಯಿಲ್ಲದರುಣವೇ
ಜೈ ಭಾರತಿ ಜೈ ಭಾರತಿ ಜೈ ಭಾರತಿ ನೀನೆ ಜಗದ ಸಾರಥಿ….